Maths With Me

“Summer camp shines in Chickballapur @Akshaya Tutorials”

Ravi R Nandi
Ravi R Nandi

ಚಿಕ್ಕಬಳ್ಳಾಪುರದಲ್ಲಿ ನಡೆದಂತಹ ಸಮ್ಮರ್ ಕ್ಯಾಂಪ್ ಬೇಸಿಗೆ ಶಿಬಿರ ಅತ್ಯಂತ ಮನೋಹವಾಗಿ ನಡೆಯುತ್ತಿದೆ
ಸುಮಾರು 15ರಿಂದ 20 ವಿದ್ಯಾರ್ಥಿಗಳು ಈ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದು ಈ ಬೇಸಿಗೆ ಶಿಬಿರವನ್ನು ಅಕ್ಷಯ ಟುಟೋರಿಯಲ್ ಅವರು ನಡೆಸುತ್ತಿದ್ದಾರೆ
ನಮಗೆಲ್ಲ ತಿಳಿದಿರುವ ಹಾಗೆ ಈ ಬೇಸಿಗೆಯಲ್ಲಿ ವಿದ್ಯಾರ್ಥಿಗಳು ತರತರವಾದಂತಹ ಸಮ್ಮರ್ ಕ್ಯಾಂಪುಗಳನ್ನು ಸೇರಿಕೊಳ್ಳುತ್ತಿರುತ್ತಾರೆ ಆದರೆ ಈ ಸಮ್ಮರ್ ಕ್ಯಾಂಪ್ ನಲ್ಲಿ ಬಹಳ ವಿಶೇಷತೆ ಏನೆಂದರೆ, ಮಕ್ಕಳಿಗೆ ಬೇಕಾಗಿರುವಂತಹ ಕೋಕರಿಕುಲರ್ ಆಕ್ಟಿವಿಟೀಸ್ ನಲ್ಲಿ ಬಹಳ ಪ್ರಾಮುಖ್ಯತೆಯನ್ನು ಕೊಟ್ಟಿರುವಂತದ್ದು ಎದ್ದು ಕಾಣುತ್ತದೆ.,

/
ನಮಗೆಲ್ಲ ತಿಳಿದಿರುವ ಹಾಗೆ ಸಮ್ಮರ್ ಕ್ಯಾಂಪುಗಳಲ್ಲಿ ಮಕ್ಕಳನ್ನು ಸ್ವಿಮ್ಮಿಂಗ್ ,ವಾಕಿಂಗ್, ಟ್ರೆಕ್ಕಿಂಗ್, ಈ ರೀತಿಯಾಗಿ ತರತರವಾದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹ ವುದು ಸರ್ವೇಸಾಮಾನ್ಯ ಆದರೆ ಆ ಮಕ್ಕಳಲ್ಲಿ ಇರುವಂತಹ ಅವರ ಕಲೆಗಳನ್ನು ಗುರುತಿಸುವಂತಹ ಚಟುವಟಿಕೆಗಳನ್ನು ಮಾಡಿಸುವರು ಕೇವಲ ಬೆರಳೆಣಿಕೆ ಅಷ್ಟು ಮಾತ್ರ ಆದರೆ ಈ ಅಕ್ಷಯ ಟುಟೋರಿಯಲ್ ಮಾಡಿರುವಂತಹ ಸಾಹಸವಿನೆಂದರೆ ಈ ಮಕ್ಕಳಲ್ಲಿ ಇರುವಂತಹ ಅಡಗಿರುವಂತಹ ಕಲೆಯನ್ನು ಹೊರ ತರಲು ಪ್ರಯತ್ನ ಪಟ್ಟಿದ್ದಾರೆ ಮತ್ತು ಅದರಲ್ಲಿ ಯಶಸ್ಸನ್ನು ಕೂಡ ಕಂಡುಕೊಂಡಿದ್ದಾರೆ.

ಬೇಸಿಗೆ ಶಿಬಿರವು ಈ ಏಪ್ರಿಲ್ ಮೂರರಿಂದ ಪ್ರಾರಂಭವಾಗಿದ್ದು ಮಕ್ಕಳಲ್ಲಿ ಮೊದಲನೇ ದಿನವೇ ಅವರ ಬಗ್ಗೆ ಹೇಳಿಕೊಳ್ಳುವಂತಹ ಚಟುವಟಿಕೆಯನ್ನು ಕೊಟ್ಟಿದ್ದು ಅದರಲ್ಲಿ ಕೆಲ ವಿದ್ಯಾರ್ಥಿಗಳು ಸಂತಸದಿಂದ ಪಾಲ್ಗೊಂಡಿದ್ದು ಅವರವರ ಬಗ್ಗೆ ಹೇಳಿಕೊಂಡು ಬೇರೆಯವರ ಪರಿಚಯವನ್ನು ಕೂಡ ಮಾಡಿಕೊಂಡಿರುತ್ತಾರೆ.

ಅದೇ ರೀತಿ ಎರಡನೇ ದಿನದಲ್ಲಿ ಡ್ರಾಯಿಂಗ್ ಕಾಂಪಿಟೇಶನ್ ಮಾಡಿದ್ದು ಈ ಡ್ರಾಯಿಂಗ್ ಕಾಂಪಿಟೇಶನ್ ನಲ್ಲಿ ವಿದ್ಯಾರ್ಥಿಗಳು ತೋರಿಸಿರುವಂತಹ ಇಂಟರೆಸ್ಟ್ ನಿಮ್ಮ ಉಬ್ಬನ್ನು ಮೇಲೆರಿಸುತ್ತದೆ, ಅಬ್ಬ ಎಂತಹ ಕಲಾಕೃತಿಗಳನ್ನು ರೂಢಿಸಿರುತ್ತಾರೆ ಎಂದರೆ ಮಕ್ಕಳು ಯಾವುದೇ ಕೋಚಿಂಗ್ ಇಲ್ಲದೆ ಅವರಲ್ಲೇ ಕಲೆಯನ್ನು ಅಭ್ಯಾಸ ಮಾಡಿಕೊಂಡು ಈ ರೀತಿಯಾದಂತಹ ಚಿತ್ರಕಲೆಗಳನ್ನು ಬಿಡಿಸಿರುವುದು ಮೆಚ್ಚಿಕೊಳ್ಳಲು ಬೇಕಾಗುತ್ತದೆ ಅದೇ ರೀತಿ ಮುಂದೆ ಮುಂದಿನ ದಿನದಲ್ಲಿ ಅವರು ಕ್ಲೇ ಮೌಲ್ದಿಂಗ್ ಅನ್ನು ಮಾಡಿದ್ದು ಆ ಕ್ಲೇ ಮೌಲ್ದಿಂಗ್ನ ಲ್ಲಿ ಮಾಡಿರುವಂತಹ ಕಲಾ ಕೃತಿಗಳು ನಿಮ್ಮ ಮೈಮನ ಸೆಳೆಯುತ್ತವೆ.

ಅಬ್ಬ ಇಂತಹ ವಿದ್ಯಾರ್ಥಿಗಳು ಕೂಡ ಯಾವುದೇ ಕೋಚಿಂಗ್ ಇಲ್ಲದೆ ಇವುಗಳ ಬಗ್ಗೆ ಕೇವಲ ಯೂಟ್ಯೂಬ್ ಗಳನ್ನು ಅಥವಾ ತಂದೆ ತಾಯಿಯಿಂದ ಕೇಳಿಕೊಂಡು ಬಂದಿರುವಂತಹ ಕಲೆಯನ್ನು ಇಲ್ಲಿ ವ್ಯಕ್ತಪಡಿಸಿರುವುದು ಒಂದು ಆಶ್ಚರ್ಯಕರವಾದಂತಹ ಸಂಗತಿ ಎಂದು ಹೇಳಬಹುದು ಇಂತಹ ಸಂದರ್ಭದಲ್ಲಿ ಎಲ್ಲಾ ಮಕ್ಕಳು ಮೊಬೈಲ್ ಗಳನ್ನು ನೋಡಿಕೊಂಡು ಕಾಲ ಕಳೆಯುವುದು ಸರ್ವೇಸಾಮಾನ್ಯ ಆದರೆ ಇಲ್ಲಿನ ಮುಖ್ಯಸ್ಥರಾದಂತಹ ನವ್ಯ.ಸಿ ಈ ಮೊಬೈಲ್ ಬಳಕೆಯನ್ನು ಯಾವ ರೀತಿಯಾಗಿ ಒಳ್ಳೆಯ ರೀತಿಗೆ ಬಳಸಬೇಕು ಎಂದು ಪ್ರತಿದಿನ ಸಂಜೆ ಮಕ್ಕಳಿಗೆ ವಾಟ್ಸಪ್ ಮೆಸೇಜ್ ಮಾಡುವುದರ ಮುಖಾಂತರ ನಾಳಿನ ದಿನದ ಚಟುವಟಿಕೆ ಇದಾಗಿರುತ್ತದೆ ಇದರ ಬಗ್ಗೆ ತಿಳಿದುಕೊಂಡು ಬನ್ನಿ ಎಂದು ಅವರಿಗೆ ತಿಳಿಸಿರುತ್ತಾರೆ ಹಾಗಾಗಿ ಮಕ್ಕಳು ಮೊಬೈಲ್ ಬಳಸಿದರು ಕೂಡ ಬೇರೆ ಕಡೆ ಗಮನ ಸೆಳೆಯುದಂತೆ ಅವರಿಗೆ ಕೊಟ್ಟಿರುವ ಆಕ್ಟಿವಿಟಿ ಅಂದರೆ ಆ ಚಟುವಟಿಕೆ ಸಂಬಂಧಿಸಿದಂತಹ ವಿಡಿಯೋಗಳನ್ನು ನೋಡಿ ಅದರ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಅದು ಯಾವ ರೀತಿ ಮಾಡಬಹುದು ಎಂಬುದನ್ನು ಯೋಚಿಸಿಕೊಂಡು ಬರುವುದು ಉತ್ತಮವಾದಂತಹ ಸಂದೇಶವೆಂದು ಹೇಳಬಹುದು.

ಈ ರೀತಿಯಾಗಿ ಇನ್ನೂ ಮುಂದುವರೆಯುತ್ತಿದ್ದು ಜೊತೆಯಲ್ಲಿ ನಮಗೆಲ್ಲ ತಿಳಿದಿರುವ ಹಾಗೆ ಈ ಬೇಸಿಗೆ ಸಮಯದಲ್ಲಿ ಮಕ್ಕಳು ಆ ಮಕ್ಕಳು ಸ್ನೇಹಿತರನ್ನು ಸೇರಿಕೊಂಡು ಅಲ್ಲಿ ಇಲ್ಲಿ ಹೋಗಿ ಸಮಯ ಕಳೆಯುವಂತಹ ಸಮಯವನ್ನು ಆದಷ್ಟು ಈ ಬೇಸಿಗೆಯ ಬಿಸಿ ತಟ್ಟದಂತೆ ಒಂದೇ ಕೊಠಡಿಯೊಳಗೆ ಅವರನ್ನು ಸೇಫಾಗಿ ನೋಡಿಕೊಳ್ಳುವಂತಹ ಧೈರ್ಯ ಮಾಡುವುದು ಅತ್ಯಂತ ಕಷ್ಟವಾದರೂ ಇದೇ ಒಳ್ಳೆಯದು ಎಂದು ನಮಗೂ ಅನಿಸುತ್ತಿದೆ.

ಇದರ ಜೊತೆ ಜೊತೆಗೆ ಇದೆ ಬೇಸಿಗೆ ಶಿಬಿರದಲ್ಲಿ ಟ್ರೆಕಿಂಗ್ ಮತ್ತು ಸೈಕ್ಲಿಂಗ್ ಕೂಡ ಪ್ಲಾನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.ಮಕ್ಕಳಿಗೆ ಮದ್ಯಾಹ್ನ ದ ವೇಳೆ ಬಿಸಿ ತಟ್ಟ ಬಾರದೆಂದು “ಥೀಯೇಟರ್ ಪ್ಲೇ “/ “ಸಿನಿಮಾ ಪ್ರದರ್ಶನ ” ಮಕ್ಕಳ ಚಿತ್ರಗಳನ್ನು ಕೂಡ ಇಲ್ಲಿ ತೋರಿಸುತ್ತಿದ್ದಾರೆ.

ಈ ಬೇಸಿಗೆ ಶಿಬಿರಕ್ಕೆ ನೀವು ಪಾಲ್ಗೊಳ್ಳ ಬೇಕು ಎಂದು ಇಷ್ಟ ಪತ್ತಿದಲ್ಲಿ ಈ ನಂಬರ್ ಗೆ ಕರೆ ಮಾಡಿ ಅಥವಾ ವಾಟ್ಸ್ ಆಪ್ ಮಾಡಿ

8553081555

Share this Article
Leave a comment

Leave a Reply

Your email address will not be published. Required fields are marked *